ಜೂನ್ 22ರಿಂದ 28ರ ವರೆಗೆ ಕಾಶ್ಮೀರದ ಪಹಲ್ ಗಾಮ್ ನಲ್ಲಿ ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ 11ನೇ ರಾಷ್ಟ್ರೀಯ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ ,ಶಿವಮೊಗ್ಗ ಜಿಲ್ಲಾ ಸ್ಕ್ವಾಯ್ ಅಸೋಸಿಯೇಷನ್ ಕ್ರೀಡಾಪಟು ,ಹಾಗೂ ಎಚ್ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮತ್ತು ಶ್ರೀಮತಿ ಸುಮಾ ರಾಮಚಂದ್ರ ದಂಪತಿಗಳ ಪುತ್ರ ,ಶಶಾಂಕ್ ಆರ್ 40 ಕೆಜಿ ಒಳಗಿನ
ಲೋಬೋ ವಿಭಾಗದಲ್ಲಿ ಭಾಗವಹಿಸಿ , ದ್ವಿತೀಯ ಸ್ಥಾನ ಪಡೆದು
ಮುಂಬರುವ ಇರಾಕ್ ನಲ್ಲಿ ನಡೆಯಲಿರುವ ಏಷ್ಯನ್ ಸ್ಕ್ವಾಯ್ ಪಂದ್ಯಾವಳಿಯಲ್ಲಿ ಹಾಗೂ ತಾಸ್ಕೆಂಟ್ ನಲ್ಲಿ ನಡೆಯಲಿರುವ ವರ್ಲ್ಡ್ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಪಂದ್ಯಾವಳಿಯಲ್ಲಿ , ಭಾಗವಿಸಲು ಅರ್ಹತೆಯನ್ನು ಪಡೆದಿದ್ದು
ಸ್ಕ್ವಾಯ್ ಫೆಡರೇಶನ್ ಆಫ್ ಇಂಡಿಯಾ ಭಾರತ ಸರ್ಕಾರದ ಮಾನ್ಯತೆಯನ್ನು ಪಡೆದಿದ್ದು
ಫೆಡರೇಶನ್ ಪಂದ್ಯಾವಳಿಯಲ್ಲಿ ,ಉತ್ತಮ ಪ್ರದರ್ಶನ ತೋರುವ ಮುಖಾಂತರ ಮುಂಬರುವ ನ್ಯಾಷನಲ್ ಗೇಮ್ಸ್ ನಲ್ಲಿ ಸಹ
ಭಾಗವಹಿಸುವ ನಿಟ್ಟಿನಲ್ಲಿ , ಕ್ರೀಡಾಪಟು ಹೆಜ್ಜೆಯನ್ನು ಇಟ್ಟಿದ್ದು ,ವಿಜೇತ ಕ್ರೀಡಾಪಟುವಿಗೆ ಕಲ್ಲು ಗಂಗೂರು ಕ್ರೀಡಾ ತರಬೇತಿ ಕೇಂದ್ರ
ಹಾಗೂ ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ನಾಟಕದ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ
ಸ್ಕ್ವಾಯ್ ಸಂಸ್ಥೆ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದನೆ ತಿಳಿಸಿದ್ದಾರೆ
ಕಾಶ್ಮೀರದ ರಾಷ್ಟ್ರೀಯ ಸ್ಕ್ವಾಯ್ಪಂದ್ಯಾವಳಿಯಲ್ಲಿ ಶಶಾಂಕ್ ಗೆ ಪದಕ
