ಗಾಂಜಾ ಸಾಗಾಣಿಕೆದಾರರಿಗೆ ಕಠಿಣ ಶಿಕ್ಷೆ

ಆಂದ್ರದಿಂದ ಗಾಂಜಾವನ್ನ ತಂದು ಶಿವಮೊಗ್ಗದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್ ಗೆ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹವಾಸ ಹಾಗೂ ದಂಡವಿಧಿಸಿ ತೀರ್ಪು ನೀಡಿತ್ತು.

2021 ನೇ ಇಅವಿಯಲ್ಲಿ, ಆಗಿನ ಎಸ್ಪಿ ಲಕ್ಷ್ಮೀಪ್ರಸಾದ್ ಇದ್ದಾಗ ಗಾಂಜಾದ ಮೂಲಕ್ಕೆ ಹೋಗಿ ಕಿತ್ತು ಹಾಕುವ ಆಪರೇಷನ್ ಗೆ ಕೈಹಾಕಿದ್ದರ ಪರಣಾಮ ಈ ಗ್ಯಾಂಗ್ ಪತ್ತೆಯಾಗಿತ್ತು.  ತುಂಗ ನಗರ ಪೊಲೀಸರು ಪತ್ತೆಹಚ್ಚಿ ನಾಲ್ವರನ್ನ ಬಂಧಿಸಿದ್ದಾರೆ. ಬಂಧಿತರಿಂದ 21 ಕೆಜಿ ಗಾಂಜಾವನ್ನ ಸೀಜ್ ಮಾಡಿದ್ದರು.

1) ದೌಲತ್ @ ಗುಂಡು, 2) ಮುಜೀಬ್ @ ಬಸ್ಟ್, 3) ಶೋಹೇಬ್ @ ಚೂಡಿ ಮತ್ತು 4) ಮಹಮ್ಮದ್ ಜಫ್ರುಲ್ಲಾ ರವರು ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಇನೋವಾ ಕಾರಿನಲ್ಲಿ ಸಂಗ್ರಹಿಸಿಟ್ಟುಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಆಂದ್ರಪ್ರದೇಶದಿಂದ ಶಿವಮೊಗ್ಗ ನಗರದ ಕಡೆಗೆ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ತುಂಗ ನಗರ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ.‌

ತುಂಗ ನಗರ ಪಿಐ ದೀಪಕ್ ಎಂ ಎಸ್,  ನೇತೃತ್ವದ ತಂಡವು ಶಿವಮೊಗ್ಗ ಟೌನ್ ಲಕ್ಕಿನಕೊಪ್ಪ ಕ್ರಾಸ್ ನ ಹತ್ತಿರ ಹಾಲ್ ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ ಇನೋವಾ ಕಾರನ್ನು ತಡೆದು ಪರಿಶೀಲಿಸಿಸಿದ್ದಾರೆ.‌ ಕಾರಿನ ಸ್ಟೆಪ್ನಿ, ಹಿಂಬಾಗದ ಡೋರ್ ಗಳು, ಮುಂಬಾಗದ ಡೋರ್ ಗಳು ಮತ್ತು ಬಾನೆಟ್ ನ ಒಳಗೆ ಗಾಂಜಾ ಪ್ಯಾಕೇಟ್ ಗಳು ದೊರೆತಿದೆ.

ನಾಲ್ಕು ಜನ ಆರೋಪಿತರನ್ನು ಬಂಧಿಸಿ, ಅಂದಾಜು ಮೌಲ್ಯ 6,50,000/- ರೂಗಳ 21 ಕೆ.ಜಿ. 315 ಗ್ರಾಂ ತೂಕ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಕಾರ್ ಅನ್ನು ವಶಪಡಿಸಿಕೊಂಡು, ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0403/2021 ಕಲಂ 8(c),20(b),20(ii) (C)) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀಮತಿ ಭಾರತಿ, ಬಿ ಹೆಚ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ.

ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 15-06-2024 ರಂದು ಆರೋಪಿತರಾದ 1) ದೌಲತ್ @ ಗುಂಡು, 27 ವರ್ಷ, ಇಂದಿರಾನಗರ್, ಶಿವಮೊಗ್ಗ ಟೌನ್, 2) ಮುಜೀಬ್ @ ಬಸ್ಟ್, 27 ವರ್ಷ, ಇಂದಿರಾನಗರ, ಶಿವಮೊಗ್ಗ ಟೌನ್, 3) ಶೋಹೇಬ್ @ ಚೂಡಿ, 24 ವರ್ಷ, ಕಡೇಕಲ್, ಶಿವಮೊಗ್ಗ ಟೌನ್ ಮತ್ತು 4) ಮಹಮ್ಮದ್ ಜಫ್ರುಲ್ಲಾ, 24 ವರ್ಷ, ಕಡೇಕಲ್ ಶಿವಮೊಗ್ಗ ಟೌನ್, ಇವರುಗಳಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 1,05,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿ ಆದೇಶಿಸಿರುತ್ತಾರೆ.

Leave a Reply

Your email address will not be published. Required fields are marked *