“ಶಿಸ್ತುಬದ್ಧ ಜೀವನವನ್ನು ರೂಪಿಸಲು ಸ್ಕೌಟ್ಸ್ ಮತ್ತು ಗೈಡ್ ಶಿಬಿರಗಳು ಪೂರಕ”.

ನಗರದ ಬಿ.ಹೆಚ್. ರಸ್ತೆಯ ಸ್ಕೌಟ್ಸ್ ಭವನದಲ್ಲಿ ಜು.5 ರಿಂದ ಜು.7ರ ವರೆಗೆ “ರಾಜ್ಯಪುರಸ್ಕಾರ ಪೂರ್ವಸಿದ್ಧತಾ ಪರೀಕ್ಷಾ ಶಿಬಿರ”ವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 242 ಸ್ಕೌಟ್ಸ್, ಗೈಡ್ಸ್, ರೋವರ್, ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, ಶಿಬಿರದ ಉದ್ಘಾಟನೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ. ಬಿ.ಕೃಷ್ಣಪ್ಪ ನವರು ನೆರವೇರಿಸಿದರು.ಉದ್ಘಾಟನಾ ನುಡಿಯಲ್ಲಿ ಶಿಬಿರಗಳು ಮಕ್ಕಳಲ್ಲಿ “ ಶಿಸ್ತುಬದ್ಧಜೀವನ ರಾಷ್ಟ್ರಾಭಿಮಾನ, ಸ್ವಾಭಿಮಾನ, ಸೇವಾಮನೋಭಾವ ,ಸಂಸ್ಕಾರ, ಉತ್ತಮ ಸಂಸ್ಕೃತಿ, ಪರಸ್ಪರ ಸಹಕಾರ, ಪರಸ್ಪರ ಗೌರವ ವಿನಿಮಯದಂತಹ ಉದಾತ್ತ ಗುಣಗಳನ್ನು ಬೆಳೆಸುವಲ್ಲಿ ಪ್ರೇರಕ” ವಾಗಿವೆ ಎಂದು ಹೇಳುತ್ತಾ,”ಬೆಳೆಯುವ ಪೈರು ಮೊಳಕೆಯಲ್ಲಿ” ಎಂಬ ಮಾತನ್ನು ಮಕ್ಕಳಿಗೆ ವಿವರಿಸಿ ಉತ್ತಮ ಆದರ್ಶ ಜೀವನ ನಿಮ್ಮದಾಗಲಿ ಎಂದು ಆಶಿಸಿದರು.


ರೋವರ್, ರೇಂಜರ್ ವಿದ್ಯಾರ್ಥಿಗಳಾದ ಸೊರಬದ ಕು.ಲಕ್ಷ್ಮೀಶ ಹಾಗೂ ಕು.ರಿತಿಕಾ.H.R.ಶಿಬಿರದಿಂದ ತಾವು ಕಲಿತ ವಿಷಯಗಳಲ್ಲಿ ಪ್ರಥಮ ಚಿಕಿತ್ಸಾ ವಿಧಾನವು ತಮ್ಮದೈನಂದಿನ ಜೀವನದಲ್ಲಿ ಅನ್ವಯವಾಗಿರುವುದನ್ನು ಇಲ್ಲಿ ಸ್ಮರಿಸಿ ಹೆಮ್ಮೆ ಪಟ್ಟರು, ತಮ್ಮ ಜಿಲ್ಲೆಯ ಹೆಸರನ್ನು ರಾಜ್ಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವಂತೆ ಶ್ರಮ ಪಡುವುದಾಗಿ ಅಭಿಪ್ರಾಯ ಪಟ್ಟರು.
ಅಧ್ಯಕ್ಷೀಯ ನುಡಿಯಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತರಾದ ಶ್ರೀ ಬಿಂದುಕುಮಾರ್. ಅವರು ಶಿಬಿರಾರ್ತಿಗಳಿಗೆ ತಾವು ಸಮ್ಮ ಸ್ನೇಹಿತರನ್ನು ಮನವೊಲಿಸಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ವಿಸ್ತರಿಸಿ ಬಲಪಡಿಸುವಂತೆ ಕರೆಕೊಟ್ಟರು,ಹಾಗೂ ಉನ್ನತ ಶಿಕ್ಷಣದಲ್ಲಿ ಸ್ಕೌಟ್ ಮತ್ತು ಗೈಡ್ ಕೋಟಾದಡಿಯಲ್ಲಿ ಮೀಸಲಾತಿಯನ್ನು ದೊರಕಿಸುವ ಪ್ರಯತ್ನ ರಾಜ್ಯ ಸಂಸ್ಥೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಕಾರ್ಯದರ್ಶಿಯವರಾದ ಶ್ರೀ.ಹೆಚ್.ಪರಮೇಶ್ವರ್ ಅವರು ಸ್ವಾಗತಿಸಿದರು, ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀಮತಿ. ಲಕ್ಷ್ಮೀ ಕೆ ರವಿ ಅವರು ವಂದಿಸಿದರು, ಶಿಬಿರದ ತರಬೇತಿ ತಂಡದ ರೋವರ್ ವಿಭಾಗದ ನಾಯಕರಾದ ಶ್ರೀ ರಾಜೇಶ್ ಅವಲಕ್ಕಿ ಅವರು ನಿರೂಪಣೆ ಮಾಡಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಖಜಾಂಚಿ ಶ್ರೀ.ಚೂಡಾಮಣಿಪವಾರ್ ,ಜಿಲ್ಲಾ ಸ್ಥಾನಿಕ ಕಮಿಷನರ್ ಶ್ರೀ.ಕೆ.ರವಿ ,ಶ್ರೀ. ವಿಜಯಕುಮಾರ್ PRO,ಸಹಕಾರ್ಯದರ್ಶಿ ಶ್ರೀ.ವೀರೇಶಪ್ಪ.Y.R. ತರಬೇತಿತಂಡದ ನಾಯಕರುಗಳಾದ ಶಿವಶಂಕರ.ಹೆಚ್, ಚಂದ್ರಶೇಖರಯ್ಯ, ಶ್ರೀ. ಮಲ್ಲಿಕಾರ್ಜುನ ಕಾಣೂರ್ ಶ್ರೀ. ಪ್ರಮೇಶ್ವರಯ್ಯ, ತರಬೇತಿತಂಡದ ನಾಯಕಿರರಾದ ಶ್ರೀಮತಿ.ಶಾಂತಮ್ಮ. ಶ್ರೀಮತಿ, ಗೀತಾಚಿಕ್ಮಠ್. ವಿವಿಧ ತಾಲ್ಲೂಕಿನ ದಳನಾಯಕ/ನಾಯಕಿಯರು ಸಹನಾಯಕರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *