2024 ರ ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ಮುಸುಕಿನ ಜೋಳ ಹಾಗೂ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ.
ಈ ಸಮಯದಲ್ಲಿ ರೈತರಿಗೆ ಸಮಸ್ಯೆ ಆಗದಂತೆ ರಸಗೂಬ್ಬರ ಸಾಕಷ್ಟು ಪ್ರಾಮಾಣದಲ್ಲಿ ದಾಸ್ತಾನುಗೊಳಿಸಲಾಗಿದೆ ಎಂದು ಶಿವಮೊಗ್ಗ ಜಂಟಿ ಕೃಷಿ ನಿರ್ದೇಶಕರ ತಿಳಿಸಿದ್ದಾರೆ.
ಜಿಲ್ಲೆಯ ರೈತರು ಬೆಳೆಗಳಿಗೆ ಸಮಾನ್ಯವಾಗಿ ಸಾರಜನಕ ಹಾಗೂ ರಂಜಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಹೆಚ್ಚಾಗಿದೆ, ಈ ರಸಗೂಬ್ಬರದಲ್ಲಿ ಪೊಟ್ಯಾಷ್ ಅಂಶ ಇರುವುದಿಲ್ಲ. ಪೊಟ್ಯಾಷ್ ಪೋಷಕಾಂಶಗಳು ಬೆಳೆಗಳ ಇಳುವರಿಯು ಹೆಚ್ಚಾಗುವಂತೆ ಮಾಡುತ್ತವೆ.
ಈ ಕಾರಣಕ್ಕೆ ರೈತರು ಬಿತ್ತನೆ ಸಮಯದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳನ್ನು ಹೊಂದಿರುವ ರಸಗೂಬ್ಬರಗಳಾದ 10:26:26, 15:15:15, 12:36:16, 14:35:14, 17:17:17, 14:28:14, 19:19:19, 20:10:10 ಬಳಸುವುದು ಸೂಕ್ತ, ರೈತರು ಬೆಳೆಗಳಿಗೆ ಸಾರಜನಕ ಹೆಚ್ಚು ಬಳಕೆ ಮಾಡುತ್ತಿದ್ದು. ಇದು ಬೆಳೆಗಳಿಗೆ ರೋಗ ಮತ್ತು ಕೀಟ ಭಾದೆಗಳು ಹಚ್ಚು ಆಗುವ ಸಾಧ್ಯತೆ ಇರುವ ಕಾರಣ ಹವಾಮಾನ ಆಧರಿಸಿ ಶಫಾರಸ್ಸು ಪ್ರಾಮಾಣದಲ್ಲಿ ಸಾರಜನಕ ರಸಗೊಬ್ಬರ ಬಳಸಲು ತಿಳಿಸಿದ್ದಾರೆ.
ಅಧಿಕೃತ ಮಾರಾಟಗಾರರಿಂದ ಬಿಲ್ ಪಡೆದು ಕೃಷಿ ಪರಿಕರಗಳನ್ನು ಖರೀದಿಸುವುದು ಹಾಗೂ ನಕಲಿ ಬಿತ್ತನೆ ಬೀಜ, ರಸಗೂಬ್ಬರ ಹಾಗೂ ಕೀಟನಾಶಕಗಳ ಮಾರಾಟ ಕಂಡುಬಂದಲ್ಲಿ ಕೂಡಲೇ ಇಲಾಖೆಗೆ ದೂರು ಸಲ್ಲಿಸುವಂತೆ ಶಿವಮೊಗ್ಗ ಜಂಟಿ ಕೃಷಿ ನಿದೇಶಕರು ಪತ್ರಿಕ ಪ್ರಕಟಣೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವುದು.