ಹೆಚ್ಚು ತರಕಾರಿ ಸೇವಿಸುವುದರಿಂದ ಪೌಷ್ಟಿಕಾಂಶದ ಕೊರತೆ ನೀಗುತ್ತದೆ : ಡಾ. ಅಜಯ್ ಬಡ್ಡಿ

ಶಿವಮೊಗ್ಗ : ಮಕ್ಕಳಲ್ಲಿ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪೋಷಕರ ಪ್ರಭಾವ ಅತಿ ಮುಖ್ಯವಾಗಿರುತ್ತದೆ. ಹೆಚ್ಚು ತರಕಾರಿ ಸೇವಿಸುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗುತ್ತದೆ ಎಂದು ಯುನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಅಜಯ್ ಬಡ್ಡಿ ಸೂಚಿಸಿದರು.

ನಗರದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಈಗಿನ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಅತಿ ಹೆಚ್ಚು ಕಾಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಮುಖ್ಯವಾಗಿ ಪೋಷಕರು ಬೇಕರಿ ತಿನಿಸು ಚಾಕಲೇಟ್ ಹಾಗೂ ಅತಿ ಹೆಚ್ಚು ಹೊರಗೆ ಸಿಗುವ ಆಹಾರಗಳನ್ನು ನೀಡುವುದು ಕಡ್ಡಾಯವಾಗಿ ತಡೆಯಬೇಕು. ಮನೆಯಲ್ಲಿ ತಯಾರಿಸಿದ ಆಹಾರಗಳು ಅತಿ ಹೆಚ್ಚು ತರಕಾರಿಗಳನ್ನು ನೀಡುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗುವುದರಲ್ಲಿ ಸಹಾಯವಾಗುತ್ತದೆ. ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಷನ್ ಹಾಕಿಸುವುದು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅತಿ ಹೆಚ್ಚು ಗಮನ ನೀಡುವುದು ಈಗಿನ ಪರಿಸ್ಥಿತಿಯಲ್ಲಿ ಅತಿ ಮುಖ್ಯವಾಗಿರುತ್ತದೆ ಎಂದರು.

ಯಾವಾಗಲೂ ಪೋಷಕರು ಮಕ್ಕಳ ಮುಂದೆ ತಂದೆ ತಾಯಿಯ ಸಂಬಂಧ ಒಳ್ಳೆಯ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಪೋಷಕರನ್ನು ಅವಲಂಬಿಸಿ ಅನುಕರಣೆ ಮಾಡುವುದರಿಂದ ಪೋಷಕರು ಹೇಗೆ ನಯ ವಿನಯದಿಂದ ಮಕ್ಕಳ ಮುಂದೆ ವರ್ತಿಸುತ್ತಾರೋ ಅದೇ ರೀತಿ ಮಕ್ಕಳು ಮುಂದಿನ ದಿನಗಳಲ್ಲಿ ಅನುಸರಿಸುತ್ತಾರೆ. ಹಾಗೆಯೇ ಒಳ್ಳೆಯ ಆಹಾರ ತರಕಾರಿಗಳು ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಮಾತನಾಡಿ, ಕಾರ್ಯಕ್ರಮಕ್ಕೆ ಪ್ರಖ್ಯಾತ ವೈದ್ಯ ಡಾ. ಅಜಯ್ ಬಡ್ಡಿಯವರು ಆಗಮಿಸಿ ನಮಗೆಲ್ಲ ಮಕ್ಕಳ ಬೆಳವಣಿಗೆಗೆ ಅತಿ ಮುಖ್ಯವಾದ ಅಂಶಗಳು ಹಾಗೂ ಪೋಷಕರ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ ಅವರಿಗೆ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಈಶ್ವರ್.ಬಿ.ವಿ,
ಜೋನಲ್ ಲೆಫ್ಟಿನೆಂಟ್ ಮಂಜುನಾಥ್ ಕದಂ,
ಪಿಡಿಜೆ ಜಿ.ಎನ್.ಪ್ರಕಾಶ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಕೊಠೋಜಿ, ಜಗದೀಶ್, ಚಂದ್ರು, ಬಲರಾಮ್, ಬಸವರಾಜ್ ಆನ್ಸ್ ಕ್ಲಬ್ ಅಧ್ಯಕ್ಷರಾದ
ಗೀತಾ ಜಗದೀಶ್, ಶುಭ ಚಿದಾನಂದ ಹಾಗೂ ರೋಟರಿ ಮತ್ತು ಆನ್ಸ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *