ಗೀತಗಾಯನ ಸ್ಪರ್ಧೆಯಿಂದ ಮಕ್ಕಳ ಪ್ರತಿಭೆ ಅನಾವರಣ

ಶಿವಮೊಗ್ಗ: ಗೀತ ಗಾಯನ ಸ್ಪರ್ಧೆಯಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗುತ್ತದೆ. ದೇಶಪ್ರೇಮ, ರಾಷ್ಟ್ರಭಕ್ತಿ ವೃದ್ಧಿಸುವಲ್ಲಿ ದೇಶಭಕ್ತಿ ಗೀತೆಗಳ ಕಲಿಕೆ ಪೂರಕ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಹೇಳಿದರು.
ನಗರದ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆ ಭಾರತೀಯ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಅವಶ್ಯಕ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಅತ್ಯಂತ ಮುಖ್ಯ. ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷ. ಸ್ಪರ್ಧೆಯಲ್ಲಿ ಆಯ್ಕೆಯಾದವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ರಾಜ್ಯಮಟ್ಟಕ್ಕೆ ಹೋಗಲು ಅವಕಾಶವಿರುತ್ತದೆ ಎಂದು ಸಲಹೆ ನೀಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರ್ಯದರ್ಶಿ ವೈ.ಆರ್.ವೀರೇಶಪ್ಪ ಮಾತನಾಡಿ, ನಮ್ಮ ತಾಲೂಕಿನಿಂದ ಅನೇಕರು ರಾಜ್ಯಮಟ್ಟದಲ್ಲಿ ಗೆಲುವು ಕಂಡಿರುವ ಉದಾಹರಣೆಗಳಿವೆ. ಶಿಕ್ಷಕರು ಹಾಗೂ ಮಕ್ಕಳು ಹೆಚ್ಚಿನ ಪರಿಶ್ರಮ ವಹಿಸಿ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಜ್ಞಾನದೀಪ ಶಾಲೆಯು ಕಬ್, ಬುಲ್ ಬುಲ್, ಸ್ಕೌಟ್ ವಿಭಾಗದಲ್ಲಿ ಪ್ರಥಮ, ಜೈನ್ ಪಬ್ಲಿಕ್ ಶಾಲೆಯು ಗೈಡ್ ವಿಭಾಗದಲ್ಲಿ ಪ್ರಥಮ, ಸ್ಕೌಟ್ ವಿಭಾಗದಲ್ಲಿ ದ್ವಿತೀಯ, ನ್ಯಾಷನಲ್ ಪಬ್ಲಿಕ್ ಶಾಲೆಯು ಬುಲ್ ಬುಲ್ ವಿಭಾಗದಲ್ಲಿ ದ್ವಿತೀಯ, ಸ್ಕೌಟ್‌ನಲ್ಲಿ ತೃತೀಯ, ಆದಿಚುಂಚನಗಿರಿ ಶಾಲೆ ಗೈಡ್‌ನಲ್ಲಿ ತೃತೀಯ, ರೋವರ್ಸ್‌ ವಿಭಾಗದಲ್ಲಿ ಎಟಿಎನ್‌ಸಿ ಕಾಲೇಜು ಪ್ರಥಮ, ಡಿವಿಎಸ್ ಕಾಲೇಜು ದ್ವಿತೀಯ, ರೇಂಜರ್ಸ್‌ ವಿಭಾಗದಲ್ಲಿ ಪ್ರಥಮ, ಎಚ್.ಎಸ್. ರುದ್ರಪ್ಪ ಪಿಯು ಕಾಲೇಜು ದ್ವಿತೀಯ ಬಹುಮಾನ ಗಳಿಸಿತು.
ಕಾರ್ಯಕ್ರಮದಲ್ಲಿ 9 ಶಾಲೆ ಹಾಗೂ 4 ಕಾಲೇಜಿನಿಂದ 6 ವಿಭಾಗದಲ್ಲಿ 8 ಶಾಲೆಗಳು ಭಾಗವಹಿಸಿದ್ದವು. ವಿದುಷಿ ಉಮಾ ದೀಲೀಪ್, ಉಮೇಶ್ ಅಂಗಡಿ, ಶಾಂಭವಿ, ಸಂಚಿತಾ ತೀರ್ಪುಗಾರರಾಗಿದ್ದರು. ಸ್ಕೌಟ್ಸ್ ಗೈಡ್ಸ್ ಶಿಕ್ಷಕಿ ಮೀನಾಕ್ಷಮ್ಮ, ದಾಕ್ಷಾಯಿನಿ ರಾಜಕುಮಾರ್, ಗೀತಾ ಚಿಕ್ಕಮಠ್, ಅಲ್ಪನಾ, ಮಮತಾ, ಸುನಂದಾ, ಕಾನ್ಸಟೇನ್ಸ್ ಐಮನ್ ಶೀಲಾ, ಸಂತೋಷ್ ನಾಯ್ಕ್, ಮೋಹನ್, ಸಂಗೀತ ಶಿಕ್ಷಕ ವಸಂತ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *