ಶಿವಮೊಗ್ಗ: ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸುವುದು ಅತ್ಯಂತ ಅವಶ್ಯಕ. ಉತ್ತಮ ಹೊಂದಾಣಿಕೆಯಿಂದ ಸುದೀರ್ಘ ದಾಂಪತ್ಯ ಜೀವನ ಸಾಧ್ಯ ಎಂದು ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಿಪ್ಪನ್ಪೇಟೆ ಸಮೀಪದ ದೂನ ಗ್ರಾಮದಲ್ಲಿ ಆಯೋಜಿಸಿದ್ದ ಚನ್ನವೀರಪ್ಪ ಗೌಡ್ರು ಹಾಗೂ ವಿಶಾಲಕ್ಷಮ್ಮ ದಂಪತಿಯ 60ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ವಾರ್ಥವೇ ಎಲ್ಲೆಡೆ ಕಾಣುತ್ತೇವೆ. ಅವಿಭಕ್ತ ಕುಟುಂಬಕ್ಕಾಗಿ ಶ್ರಮಿಸಿ ಹೊಂದಾಣಿಕೆಯ ದಾಂಪತ್ಯ ಜೀವನ ನಡೆಸುವುದು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಸಮಾಜದ ಪ್ರತಿಯೊಬ್ಬರು ಉತ್ತಮ ಜೀವನಶೈಲಿ ರೂಪಿಸಿಕೊಳ್ಳಲು ಗುರುಹಿರಿಯರ ಮಾರ್ಗದರ್ಶನ ಪಡೆಯಬೇಕು. ಒಳ್ಳೆಯ ಆಲೋಚನೆಗಳು ಹಾಗು ಮತ್ತೊಬ್ಬರಿಕೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಮನೆಗಳಲ್ಲಿ ಪಾಲಕರು ಸಂಸ್ಕಾರ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ಚನ್ನವೀರಪ್ಪ ಗೌಡ್ರು, ಸಹೋದರರಾದ ಶಿವನಂದಪ್ಪ ಗೌಡ್ರು ಮತ್ತು ಗಂಗಾಧರಪ್ಪ ಗೌಡ್ರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕಷ್ಟಪಟ್ಟು ಬೆಳೆದಿದ್ದಾರೆ ಎಂದರು.
ವಕೀಲ ದಿನೇಶ್ ಮಣಿಕೆರೆ, ಗಂಗಾಧರಪ್ಪ ಕಳಸೆ, ಮಧುಸೂದನ್ ಡಿ.ಯು, ಸುಗಂಧರಾಜ ಇತರರು ಮಾತನಾಡಿದರು. ಅಶ್ವಿನಿ ವಿನಾಯಕ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಯುಕ್ತ ಸ್ವಾಗತಿಸಿದರು. ರೂಪಾ ವಂದನಾರ್ಪಣೆ ಮಾಡಿದರು. ಉಮೇಶ್, ಭಾಗ್ಯಾ, ಯಶ್ವಿನ್ ಇತರರು ಹಾಜರಿದ್ದರು. ನಾಗಾರ್ಜುನ್ ಶಂಕ್ರಣ್ಣ ಸೇರಿದಂತೆ ಸಾವಿರಾರು ಜನ ಬಂದು ಮಿತ್ರರು ಹಾರೈಸಿದರು