ಉತ್ತಮ ಮೌಲ್ಯ, ಧ್ಯೇಯೋದ್ದೇಶದೊಂದಿಗೆ ಸಂಸ್ಥೆಯನ್ನು ಮುನ್ನಡೆಸುವುದು ಮುಖ್ಯ ಎಂದು ಸಹ್ಯಾದ್ರಿ ವಾಣಿಜ್ಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಅವಿನಾಶ ಹೇಳಿದರು.
ಫ್ರೆಂಡ್ಸ್ ಸೆಂಟರ್ ಶಿವಮೊಗ್ಗದ 58ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬದಲಾವಣೆಯನ್ನು, ಪರಂಪರೆಯನ್ನು, ನ್ಯೂನತೆಯನ್ನು ತಿದ್ದುವ ಸರಿಪಡಿಸುವ ಪ್ರಯತ್ನವನ್ನು ಇಂತಹ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ ನೂತನ ಕಾರ್ಯಕಾರಿ ಸಮಿತಿಯೊಂದಿಗೆ ಅಧಿಕಾರ ಸ್ವೀಕರಿಸಿ ಮಾತನಾಡಿ, ಸ್ನೇಹದ ಸೇತುವೆ ಕಟ್ಟುವ ಮೂಲಕ ಸೇವೆಯ ಸ್ಪರ್ಶ ಸಂಸ್ಥೆಗೆ ನೀಡುವುದು ನನ್ನ ಉದ್ದೇಶ ಅಂತ ತಿಳಿಸಿದರು.
ಸಂಸ್ಥೆ ವತಿಯಿಂದ ಪ್ರತಿ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಪ್ರಸ್ತಕ ಸಾಲಿನಲ್ಲಿಯೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಗತ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಂಧ್ಯಾ ಸತ್ಯ ನಾರಾಯಣ ಪ್ರಾರ್ಥಿಸಿದರು. ಎಂ.ಎಂ.ವೆಂಕಟೇಶ ಸ್ವಾಗತಿಸಿದರು. ಫ್ರೆಂಡ್ಸ್ ಸೆಂಟರ್ ಹಾಗೂ ನೇತ್ರ ಭಂಡಾರ ನಡೆದು ಬಂದ ದಾರಿಯನ್ನು ಹಿರಿಯ ಸದಸ್ಯ ನಾಗರಾಜ ವಿವರಿಸಿದರು. ಸತ್ಯ ನಾರಾಯಣ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಮಲ್ಲಿಕಾರ್ಜುನ ಕಾನೂರ್ ವಾರ್ಷಿಕ ವರದಿ ವಾಚಿಸಿದರು. ಲೋಕೇಶ್ ಅವರು ನೂತನ ಅಧ್ಯಕ್ಷ ಬಿ.ಜಿ.ಧನರಾಜಗೆ ಅಧಿಕಾರ ಹಸ್ತಾಂತರಿಸಿದರು. ಜಿ.ವಿಜಯಕುಮಾರ ನೂತನ ಅಧ್ಯಕ್ಷರ ಪರಿಚಯಿಸಿದರು. ನಿಕಟಪೂರ್ವ ಅಧ್ಯಕ್ಷ ಲೋಕೇಶ್ ದಂಪತಿಗಳಿಗೆ ಸನ್ಮಾನಿಸಲಾಯಿತು. 14 ಜನ ನೂತನ ಸದಸ್ಯರು ಸೇರ್ಪಡೆಯಾದರು. ಮಹಿಳಾ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ಸುನೀತಾ ಮೋಹನ್ ಅವರು ನೂತನ ಅಧ್ಯಕ್ಷೆ ಸಪ್ನಾ ಬದರಿನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಕಾರ್ಯದರ್ಶಿ ರವೀಂದ್ರನಾಥ ಐತಾಳ ವಂದನಾರ್ಪಣೆ ನಡೆಸಿಕೊಟ್ಟರು. ನಿರೂಪಕಿ ರಂಜಿನಿ ದತ್ತಾತ್ತಿ ನಿರೂಪಣೆ ಮಾಡಿದರು.