ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಹಾಗೂ ಎಲ್ಐಸಿ ಶಿವಮೊಗ್ಗ ಸಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ.

ನಗರದ ರೋಟರಿ ಸಂಸ್ಥೆಯ ಪ್ರಾಜೆಕ್ಟ್ ಆದ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ಸುಮಾರು 500 ಗಿಡಗಳ ಸಸಿಗಳನ್ನು ನೆಡುವುದರ ಮೂಲಕ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಹಾಗೂ ಶಿವಮೊಗ್ಗ ನಗರದ ಎಲ್ಐಸಿ ಸಂಸ್ಥೆಯ ಸಹಯೋಗದೊಂದಿಗೆ ವನಮೋತ್ಸವ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಎಲ್ಐಸಿ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಶ್ರೀನಿವಾಸ್ ರವರು ಮಾತನಾಡುತ್ತಾ ರೋಟರಿ ಸಂಸ್ಥೆಯೊಂದಿಗೆ ಈ ದಿನ ಎಲ್ಐಸಿಯು ಜೊತೆಗೂಡಿ ವನಮೋತ್ಸವ ಮಾಡುತ್ತಿರುವುದು ಬಹಳ ಸಂತೋಷವಾದ ವಿಚಾರವಾಗಿದೆ ಈ ಬಯೋ ಡೈವರ್ಸಿಟಿ ಪಾರ್ಕ್ ತುಂಬಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 10,000ಗಳಿಗಿಂತ ಹೆಚ್ಚು ಗಿಡಮರಗಳನ್ನು ಪೋಷಣೆ ಮಾಡುತ್ತಿರುವ ರೋಟರಿ ಸಂಸ್ಥೆಗೆ ಕಾರ್ಯಕ್ಕೆ ಧನ್ಯವಾದಗಳು ಮುಂದಿನ ದಿನಗಳಲ್ಲಿ ಎಲ್ಐಸಿ ಸಂಸ್ಥೆಯು ಸಮಾಜಮುಖಿ ಕೆಲಸಗಳಿಗೆ ರೋಟರಿ ಸಂಸ್ಥೆಯೊಂದಿಗೆ ಇರುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ಬಿನ ಅಧ್ಯಕ್ಷರಾದ ಕಿರಣ್ ಕುಮಾರ್ ರವರು ಮಾತನಾಡುತ್ತಾ ಸಸಿಗಳು ನೆಡುವುದು ಅಷ್ಟೇ ಅಲ್ಲ ಅದನ್ನು ನೋಡಿ ಘೋಷಣೆ ಮಾಡುವುದು ಬಹಳ ಮುಖ್ಯವಾದ ಕೆಲಸವಾಗಿದೆ ಆ ನಿಟ್ಟಿನಲ್ಲಿ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ ನೋಡಿಕೊಳ್ಳುತ್ತಿರುವ ಉಮೇಶ್ ರವರ ಶ್ರಮ ಶ್ಲಾಘನೀಯವಾಗಿದೆ ನಾವೆಲ್ಲ ರೋಟರಿ ಸದಸ್ಯರು ಸದಾ ತಮ್ಮ ಜೊತೆ ಇರುತ್ತವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಯೋಡೈವರ್ಸಿಟಿ ಪಾರ್ಕಿನ ಉಪಾಧ್ಯಕ್ಷರಾದ ಪಿಡಿಜಿ ಪ್ರಕಾಶ್ ಕಾರ್ಯದರ್ಶಿ ಈಶ್ವರ್, ಜೈಶೀಲ್ ಶೆಟ್ಟಿ, ಬಸವರಾಜ್, ಮಂಜುನಾಥ್ ಹೆಗಡೆ, ಗುರುರಾಜ್, ಜಗದೀಶ್ , ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಫೋಟೋಜಿ, ಅನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಜಗದೀಶ್, ಎಲ್ಐಸಿ ಸಂಸ್ಥೆಯ ಗಣೇಶ್ ಬಟ್ , ಆನಂದ್ ಇತರೆ ಸಿಬ್ಬಂದಿ ವರ್ಗದವರು ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸದಸ್ಯರಾದ ಗಿರೀಶ್ ರವರು 5,000ಗಳನ್ನು ಬಯೋ ಡ್ರೈವರ್ ಸಿಟಿ ಪಾರ್ಕ್ ಗೆ ಧಣಿಗೆಯಾಗಿ ನೀಡಿದರು

Leave a Reply

Your email address will not be published. Required fields are marked *