ಈಗಾಗಲೇ ಜೀವ ವೈವಿಧ್ಯ ಉದ್ಯಾನದಲ್ಲಿ ವಿವಿಧ ಹಂತದಲ್ಲಿ ಹಲವಾರು ಗಿಡ ಮರಗಳನ್ನು ನೆಟ್ಟು ಪೆÇೀಷಿಸಲಾಗುತ್ತಿದ್ದು, ಇಲ್ಲಿ ಬೆಳೆಯುತ್ತಿರುವ ವೃಕ್ಷಗಳು ಹಲವಾರು ಜೀವಸಂಕುಲಗಳಿಗೆ ಆಶ್ರಯ ನೀಡುತ್ತಿವೆ ಎಂದು ಅಭಿರುಚಿ ವೇದಿಕೆಯ ಅಧ್ಯಕ್ಷ ಖ್ಯಾತ ವೈದ್ಯ ಡಾ. ಶಿವರಾಮಕೃಷ್ಣ ತಿಳಿಸಿದರು.
ಶಿವಮೊಗ್ಗದ ಅಭಿರುಚಿ ಸಾಂಸ್ಕøತಿಕ ವೇದಿಕೆಯ ಸಹಯೋಗದೊಂದಿಗೆ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ ಸದಸ್ಯರು ಅನುಪಿನಕಟ್ಟೆಯಲ್ಲಿರುವ ರೋಟರಿ ಜೀವವೈವಿಧ್ಯ ಉದ್ಯಾನದಲ್ಲಿ ವನಮಹೋತ್ಸವ ಆಚರಿಸಿ ವಿವಿಧ ಜಾತಿಯ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಈ ವೇಳೆ ಮಾತನಾಡಿದ ಅವರು, ಈ ವಿಶಾಲವಾದ ಜಾಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಉದ್ಯಾನವು ಶಿವಮೊಗ್ಗದ ಹಲವು ರೋಟರಿ ಕ್ಲಬ್ಗಳ ಕನಸಿನ ಯೋಜನೆ ಆಗಿದ್ದು, ಈ ಕಾರ್ಯಕ್ಕೆ ನಗರದ ಇತರೆ ಸಂಘ ಸಂಸ್ಥೆಗಳು ಸಹ ಕೈಜೋಡಿಸುತ್ತಿವೆ ಎಂದರು.
ವನಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷರಾದ ರೊ. ಮುಸ್ತಾಕ್ ಅಲಿಶಾ, ತಮ್ಮ ಗೊಬ್ಬರ ಉತ್ಪಾದನಾ ಸಂಸ್ಥೆಯಾದ ಅಗ್ರೀನಿಯಾ ವತಿಯಿಂದ ಉದ್ಯಾನದಲ್ಲಿನ ಗಿಡ ಮರಗಳಿಗಾಗಿ ಸಂಪೂರ್ಣ ಸಾವಯವ ಗೊಬ್ಬರವನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ತಮ್ಮ ಸಂಸ್ಥೆಯಿಂದ ಈಗಾಗಲೇ ಜಿಲ್ಲೆಯ ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ಉಚಿತವಾಗಿ ಸಾವಯವ ಗೊಬ್ಬರವನ್ನು ವಿತರಿಸುತ್ತಿದ್ದು, ರೋಟರಿ ಕ್ಲಬ್ನ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಭಿರುಚಿ ವೇದಿಕೆಯ ಕಾರ್ಯದರ್ಶಿ ಕುಮಾರ ಶಾಸ್ತ್ರಿ, ಎಂ.ಪ್ರಕಾಶ್ ಬಾಬು, ಶ್ರೀನಾಥ್ ಅಯ್ಯರ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಕಾಂತ್ ಹಾಗೂ ಸದಸ್ಯರಾದ ರಾಜು.ಸಿ, ಪ್ರಕಾಶ್ ಮೂರ್ತಿ, ಬಸವರಾಜ್ ಅಣಜಿ ಹಾಗೂ ಡಾ. ಸಿದ್ದಲಿಂಗ ಮೂರ್ತಿರವರು ಉಪಸ್ಥಿತರಿದ್ದರು.