ಗೀತ ಭಾರತಿ ಇಡೀ ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಕಾರ್ಗಿಲ್ ಯುದ್ಧದ ೨೫ನೇ ವಾರ್ಷಿಕೋತ್ಸವ ಮತ್ತು ಸ್ವಾತಂತ್ರö್ಯ ದಿನಾಚರಣೆಯ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಗೀತ ಭಾರತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ರಾಜ್ಯಾದಾದ್ಯಂತ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಮಲ್ನಾಡ್ ಓಪನ್ ಗ್ರೂಪ್ ಉತ್ತಮ ಕೆಲಸ ಮಾಡುತ್ತಿದೆ. ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಮಾಜಿ ಶಾಸಕ ಎಸ್.ರುದ್ರೇಗೌಡ ಮಾತನಾಡಿ, ದೇಶಭಕ್ತಿಯನ್ನು ಪ್ರಜ್ವಲಿಸುವ ಗೀತ ಭಾರತಿ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯಬೇಕು. ಇಂದಿನ ಯುವಜನಾಂಗ ಇಂತಹ ವೀರಯೋಧರ ಸ್ಫೂರ್ತಿ ದಾಯಕ ಮಾತುಗಳನ್ನು ಕೇಳಿ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ಆಯೋಜನೆಗೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಇದೇ ರೀತಿ ಹೆಚ್ಚಿನ ಶಾಲೆಗಳು ಭಾಗವಹಿಸಬೇಕು. ನಮ್ಮ ಕೈಗಾರಿಕಾ ಸಮೂಹದಿಂದ ಕೈಲಾದ ಸಹಕಾರ ಸದಾ ಇರುತ್ತದೆ ಎಂದರು.
ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಇದು ಅಭೂತಪೂರ್ವ, ಅನುಕರಣೀಯ ಕಾರ್ಯಕ್ರಮ. ಶಿವಮೊಗ್ಗ ಜಿಲ್ಲಾ ಸಂಸ್ಥೆಯಿಂದ ಕಾರ್ಯಕ್ರಮಕ್ಕೆ ಸದಾ ಪ್ರೋತ್ಸಾಹ ಇರುತ್ತದೆ ಎಂದು ತಿಳಿಸಿದರು.
ನಗರದ ಶ್ರೀ ರಾಗರಂಜಿನಿ ಸಂಗೀತ ಶಾಲೆ, ಮೇರಿ ಇಮ್ಯಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ, ಪಿಇಎಸ್ ಶಾಲೆ, ಭಾರತೀಯ ವಿದ್ಯಾ ಭವನ, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ, ಶ್ರೀ ಶಾರದಾ ದೇವಿ ಅಂಧರ ವಸತಿ ಶಾಲೆ, ಡೆಲ್ಲಿ ವರ್ಲ್ಡ್ ಸ್ಕೂಲ್, ಕಸ್ತೂರಬಾ ಪ್ರೌಢಶಾಲೆ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಗೀತ ಭಾರತಿ ಕಾರ್ಯಕ್ರಮದಲ್ಲಿ ನಗರದ 8 ಶಾಲೆಯ 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಮುಖರಾದ ಎಚ್.ಪರಮೇಶ್ವರ್, ರಾಜೇಶ್ ವಿ ಅವಲಕ್ಕಿ, ಜಿ.ವಿಜಯ್ ಕುಮಾರ್, ರಾಜು, ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಹಾಗೂ ಮಲ್ನಾಡ್ ಓಪನ್ ಗ್ರೂಪ್ ಹಿರಿಯ ಸದಸ್ಯ ಗಿರೀಶ್, ಚಂದ್ರಹಾಸ್, ಚೇತನ್ ರಾಯನಹಳ್ಳಿ, ಶ್ರೀನಿವಾಸ್ ವರ್ಮಾ, ಟಿ.ಎನ್.ಸುಜಯ್, ಸತ್ಯನಾರಾಯಣ ಹೊಳ್ಳ, ರೂಪ ಹೊಳ್ಳ, ರಾಘವೇಂದ್ರ ಆರ್., ಕೀರ್ತಿ ಕುಮಾರ್, ಅಜಯ್, ಶ್ರೇಯಾಂಕಾ, ರಕ್ಷಾ, ಘನಶ್ಯಾಮ್ ಗಿರಿಮಾಜಿ, ಪೃಥ್ವಿರಾಜ್ ಗಿರಿಮಾಜಿ, ದೊರೈ ಸಿ, ಮಂಜುನಾಥ್, ರಾಜು, ಶಾಂತಮ್ಮ, ಅಶ್ವಿನಿ ದೊರೈ, ಹೇಮಲತಾ, ಸುನಂದಮ್ಮ, ಚಂದನ್, ಲೋಹಿತ್ ಪ್ರಸಾದ್, ಕೇಶವ, ಕಿರಣ ಕುಮಾರ್, ರೇಣುಕಯ್ಯ ಉಪಸ್ಥಿತರಿದ್ದರು.