ಆಗಸ್ಟ್ ಎಂಟರಂದು ಎಂಟು ಸೇವಾ ಯೋಜನಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷರಾದ ರೋ.ರೂಪಾ ಪುಣ್ಯಕೋಟಿ ಅವರು, ಸದಸ್ಯರ ಸಹಕಾರದೊಂದಿಗೆ ಬೆಳಗ್ಗೆ ರೋಟರಿ ಬಯೋಡೈವರ್ಸಿಟಿಯಲ್ಲಿ ವನಮಹೋತ್ಸವ ಕಾರ್ಯಕ್ರಮದ ಮೂಲಕ ತಮ್ಮ ಸೇವಾ ಯೋಜನೆ ಆರಂಭ ಮಾಡಿದರು.
ಅನಂತರದಲ್ಲಿ ಮೆಗ್ಗಾನ ಆಸ್ಪತ್ರೆಯಲ್ಲಿ ೧೦ ಬಾಣಂತಿಯರ ಮಗುವಿಗೆ ಹೊದಿಕೆಯನ್ನು ತಮ್ಮ ಕಾರ್ಯದರ್ಶಿ ರೋ.ಪ್ರಕೃತಿ ಅವರೊಂದಿಗೆ ವಿತರಣೆ ಮಾಡಿ, ಗುಡಲಕ್ ಆರೈಕೆ ಕೇಂದ್ರದಲ್ಲಿ ಹಿರಿಯರಿಗೆ ಪೌಷ್ಠಿಕಾಂಶ ಉಳ್ಳ ಆಹಾರದ ಪ್ಯಾಕ್‌ಗಳನ್ನು ವತರಣೆ ಮಾಡಿದರು. ಅನಂತರ ಕಾಶಿಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮದ್ಯಾಹ್ನ ಬಿಸಿಯೂಟಕ್ಕೆ ಅನುಕೂಲವಾಗುವಂತೆ ಸಿಹಿ ಪದಾರ್ಥ ತಯಾರು ಮಾಡುವ ವಸ್ತುಗಳನ್ನು ನೀಡಿದರಲ್ಲದೆ, ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಲು ಅರಿವು ಕಾರ್ಯಕ್ರಮ ನಡೆಸಿ ಬಟ್ಟೆ ಬ್ಯಾಗಗಳ ಬಳಕೆಯ ಬಗ್ಗೆ ಮನವರಿಕೆ ಮಾಡಿದರು. ಅನಂತರದಲ್ಲಿ ಚೇತನ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ, ಬಿ ಎಚ್ ರಸ್ತೆಯಲ್ಲಿ ಇರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನೀಟ್ ಹಾಗೂ ಇತರ ಸ್ಪರ್ಧೆತ್ಮಕ ಪುಸ್ತಕ ವಿತರಣೆ ಮತ್ತು ಗಂಗೋತ್ರಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಸ್ವಚ್ಚತಾ ಕಾರ್ಯಕ್ರಮ ನಡೆಸುವ ಮೂಲಕ ಎಂಟು ಯಶಸ್ವಿ ಸೇವಾ ಯೋಜನೆ ಮುಗಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನ ಹಿರಿಯ ಸದಸ್ಯರಾದ ರೋ.ಭಾರದ್ವಾಜ್, ರೋ.ಎಸ್.ಆರ್.ಲಕ್ಷ್ಮೀನಾರಾಯಣ್, ರೋ.ಎಸ್.ಎಸ್.ವಾಗೀಶ, ರೋ.ಸತ್ಯನಾರಾಯಣ್, ರೋ.ಡಾ.ಪ್ರಕೃತಿ, ರೋ.ರೇಣುಕಾರಾಧ್ಯ ಹಾಗೂ ಇತರರು ಹಾಜರಿದ್ದರು.