ಶಿವಮೊಗ್ಗ : ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರು ಸೈನಿಕ ಅಧಿಕಾರಿಗಳು ನಿತ್ಯ ಸ್ಮರಣೀಯರು ಎಂದು ಶಿವಮೊಗ್ಗ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ 20 ವರ್ಷಗಳ ಕಾಲ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶದ ವಿವಿಧ ಭಾಗಗಳಲ್ಲಿ ಅನೇಕ ಸೇವೆಗಳನ್ನ ಸಲ್ಲಿಸಿದ ಮಹಾಬಲೇಶ್ವರ ಹೆಗಡೆ ದಂಪತಿಗಳಿಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ದೇಶಕ್ಕಾಗಿ ಹಗಲಿರಳು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಚಳಿ ಮಳೆ ಗಾಳಿಯಲ್ಲಿ ಯಾವುದನ್ನು ಲೆಕ್ಕಿಸದೆ ಗಡಿ ಭಾಗಗಳಲ್ಲಿ ದೇಶವನ್ನು ಕಾಯುತ್ತಿರುವ ಯೋಧರಿಗೆ ನಾವು ದೊಡ್ಡದೊಂದು ಸಲಾಂ ಅರ್ಪಿಸುತ್ತಿದ್ದೇವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮಹಾಬಲೇಶ್ವರ ಹೆಗಡೆಯವರು ಮಾತನಾಡಿ, ದೇಶ ಸೇವೆಯಲ್ಲಿ ಮಾಡಿದ ಕೆಲಸ ನಿಜವಾಗು ತೃಪ್ತಿ ತಂದಿದೆ. ಇಂತಹ ಪವಿತ್ರವಾದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ತುಂಬಾ ಹೆಮ್ಮೆಯಾಗಿದೆ. ಹಿಂದೆ ಸೇನೆಗೆ ಸೇರುವವರು ಯಾವುದಕ್ಕೂ ಬಾರದವರು ಎಂಬ ಮಾತಿತ್ತು, ಆದರೆ ಈಗ ಭಾರತೀಯ ಸೇನೆ ತುಂಬಾ ಸುರಕ್ಷತೆ ಹಾಗೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆಯಲ್ಲಿ ತಮ್ಮನ ತಾವು ತೊಡಗಿಸಿಕೊಂಡು ದೇಶ ಸೇವೆಯಲ್ಲಿ ಪಾಲ್ಗೊಳ್ಳೋಣ ಎಂದ ಅವರು, ಇನ್ನರ್ ವೀಲ್ ಸಂಸ್ಥೆಗೆ ಕೃತಜ್ಞತೆಯನ್ನು ಅರ್ಪಿಸಿದರು.
ಸಮಾರಂಭದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ಶ್ವೇತಾ ಆಶಿತ್, ಮಧುರ ಮಹೇಶ್, ಜಯಂತಿ ವಾಲಿ, ಲತಾ ಸೋಮಣ್ಣ, ವೇದ ನಾಗರಾಜ್, ವಿಜಯ ರಾಯ್ಕರ್, ರಾಜೇಶ್ವರಿ ಪ್ರತಾಪ್, ವೀಣಾ ಹರ್ಷ, ನಮಿತಾ ಸೂರ್ಯನಾರಾಯಣ್, ಜ್ಯೋತಿ ಸುಬ್ಬೆಗೌಡ, ವಿನೋದಾದಳವೆ, ವಾಣಿ ಪ್ರವೀಣ್, ಗೀತಾ ಬಸವ ಕುಮಾರ್, ಪೂರ್ಣಿಮಾ ನರೇಂದ್ರ, ಲಾವಣ್ಯ ಶಶಿಧರ್, ಸುಮಾ ರವಿ, ಆಶಾ ಶ್ರೀಕಾಂತ್ ಹಾಗೂ ಇನ್ನರ್ ವೀಲ್ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.