ಶಿವಮೊಗ್ಗ : ಆಡುತ್ತಾ ನಲಿಯುತ್ತಾ ಕಲಿಯುವುದು ಜೀವನ ಶಿಕ್ಷಣ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಂಡು, ವಿದ್ಯಾಭ್ಯಾಸದ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಕಿವಿ ಮಾತು ಹೇಳಿದರು.
ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ಮಟ್ಟದ ನಿಪುಣ್ ಪರೀಕ್ಷಾ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಬದುಕುವ ಕಲೆಯ ಜೊತೆಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಶಕ್ತಿ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಇಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮುಖ್ಯ ಆಯುಕ್ತೆ ಕೆ.ಪಿ.ಬಿಂದುಕುಮಾರ್, ಸ್ಕೌಟ್ ಮತ್ತು ಗೈಡ್ಸ್ ಎಂದರೆ ಶಿಸ್ತಿನ ಸಿಪಾಯಿಗಳ ತಂಡ ಕೊವಿಡ್ ನಂತಹ ವಿಷಮಕಾಲದಲ್ಲಿ ಜಿಲ್ಲಾಸಂಸ್ಥೆಯ ರೋವರ್ ತಂಡಗಳು ಆಹಾರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ಶಿವಮೊಗ್ಗ ಭದ್ರಾವತಿ ವ್ಯಾಪ್ತಿಯಲ್ಲಿ ತಲುಪಿಸಿದನ್ನು ನಾವು ಇಂದು ಸ್ಮರಿಸಿಸಬೇಕು ಎಂದರು.
ಸ್ಥಾನಿಕಾ ಆಯುಕ್ತ ಕೆ.ರವಿ ಮಾತನಾಡಿ, ರೋವರ್ ರೇಂಜರ್ ಗಳು ತಮ್ಮ ಶಾಲೆಯಲ್ಲಿ ಹಾಗೂ ಗ್ರಾಮದಲ್ಲಿ ಮೊದಲು ಗಿಡ ನೆಡುವಂತ ಚಟುವಟಿಕೆಗಳಿಂದ ಪ್ರಾರಂಭಿಸಲು ತಿಳಿಸಿದರು. ಹಾಗೂ ಯುವಕರು ನಾಯಕತ್ವಗುಣ ಬೆಳೆಸಿಕೊಳ್ಳಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಖಜಾಂಚಿ ಚೂಡಾಮಣಿ ಪವಾರ್, ಜಂಟಿಕಾರ್ಯದರ್ಶಿ ಲಕ್ಷ್ಮಿ ಕೆ ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಕೆ.ರವಿ. ತರಬೇತಿ ತಂಡದ ನಾಯಕ ರಾಜೇಶ್ ವಿ ಅವಲಕ್ಕಿ, ಸಹನಾಯಕ ಎಂ.ಗಣಪತಿ, ಸಿ.ಎಂ.ಪರಮೇಶ್ವರಯ್ಯ, ಚಂದ್ರಶೇಖರ್, ಮಲ್ಲಿಕಾರ್ಜುನಕಾನೂರ್, ತರಬೇತಿ ತಂಡದ ನಾಯಕಿ ಕಾತ್ಯಾಯಿನಿ, ಭಾರತಿ ಸಿಂಗಾಡೆ, ಶಾಂತಮ್ಮ.ಎಂ.ಎಲ್, ವಿವಿಧ ಕಾಲೇಜುಗಳ ಉಪನ್ಯಸಕರು ಹಾಗೂ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕಾತ್ಯಾಯಿನಿ ಶಿಬಿರದ ಮಾಹಿತಿಯನ್ನು ತಿಳಿಸಿದರು. ರಾಜೇಶ್ ಅವಲಕ್ಕಿ ನಿರೂಪಿಸಿ, ಹೆಚ್.ಶಿವಶಂಕರ್ ಸ್ವಾಗತಿಸಿ, ಲಕ್ಷ್ಮಿ ಕೆ ರವಿ ವಂದಿಸಿದರು.