ಮಹಿಳೆಯರು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಿ.

ಮಹಿಳೆಯರು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಿ. ಶಬರಿ ಕಡಿದಾಳ್
ಮಹಿಳೆಯರು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದರ ಮುಖಾಂತರ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು ಇಂದು ಒತ್ತಡದ ಪ್ರಪಂಚದಲ್ಲಿ ಮಹಿಳೆ ಸಂಘ ಸಂಸ್ಥೆಗಳ ಮುಖಾಂತರ ತಮ್ಮನ್ನು ತಾವು ತೊಡಗಿಸಿ ಕೊಂಡಾಗ ದುಗುಡ ದುಮ್ಮಾನ ಖಿನ್ನತೆ ಕಡಿಮೆಯಾಗುತ್ತದೆ ಅಂತರಾಷ್ಟ್ರೀಯ ಇನ್ನರ್ ವೀಲ್ ಸಂಸ್ಥೆ ಈಗಾಗಲೇ ಪ್ರಪಂಚಾದ್ಯಂತ ತನ್ನ ಸೇವೆಗಳ ಮುಖಾಂತರ ತನ್ನದೇ ಆದ ಛಾಪು ಮೂಡಿಸಿದೆ ಸ್ನೇಹ.ಪ್ರೀತಿ
ಸೇವೆಗಾಗಿ ಹುಟ್ಟಿಕೊಂಡ ಈ ಸಂಸ್ಥೆ ಲಕ್ಷಾಂತರ ಜನ ಸದಸ್ಯರನ್ನು ಹೊಂದಿದೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಸಂಸ್ಥೆಗಳಲ್ಲಿ ಸೇರಿಕೊಂಡಾಗ ತಮ್ಮ ಪ್ರತಿಭೆ ಅನಾವರಣಗೊಳ್ಳುತ್ತದೆ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಎಂದು ಇನ್ನರ್ ವೀಲ್ ಜಿಲ್ಲಾ ವೈಸ್ ಚೇರ್ಮನ್ ಶಬರಿ ಕಡಿದಾಳ್ ಅಭಿಪ್ರಾಯ ವ್ಯಕ್ತಪಡಿಸಿದರು ಅವರು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಇನ್ನರ್ ವಿಲ್ ಶಿವಮೊಗ್ಗ ಸಂಸ್ಥೆಯ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಬಾರದು ಎಂದು ನುಡಿದ ಅವರು ಮಹಿಳೆಯರು ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ 2023.24 ನೇ ಸಾಲಿನ ಇನ್ನರ್ ವೀಲ್ ಶಿವಮೊಗ್ಗ ಅಧ್ಯಕ್ಷರಾದ ಶ್ವೇತಾ ಆಶಿತ್ ಅವರು 2024 25 ನೇ ಸಾಲಿನ ನೂತನ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಶ್ವೇತಾ ಆಶಿತಾ ಅವರು ತಮ್ಮ ಸಾಲಿನಲ್ಲಿ ಮಾಡಿದ ಸೇವಾ ಕಾರ್ಯಗಳ ವಿವರಣೆಯನ್ನು ನೀಡಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ವಾಗ್ದೇವಿ ಬಸವರಾಜ್ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಹಮ್ಮಿಕೊಂಡ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು ಮಾಜಿ ಅಧ್ಯಕ್ಷರುಗಳಿಗೆ ಫಲ ಪುಷ್ಪ ನೀಡಿ ಗೌರವಿಸಿದರು ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ನಿರ್ಮಲ ಮಹೇಂದ್ರ. ಮಧುರ ಮಹೇಶ್. ವೀಣಾ ಸುರೇಶ್
ಗೀತಾಬಸವ ಕುಮಾರ್ ಲತಾ ಸೋಮಣ್ಣ. ವಿಜಯಶ್ರೀ. ಅಮೃತ ಬಸವರಾಜ್. ವೀಣಾ ನರಹರಿ. ಚೇತನ. ಲಾವಣ್ಯ ಶಶಿಧರ್. ನಮಿತಾ ಸೂರ್ಯನಾರಾಯಣ್. ವೀಣಾ ಹರ್ಷ. ರಾಜೇಶ್ವರಿ ಪ್ರತಾಪ್. ಹಾಗೂ ಮಾಜಿ ಅಧ್ಯಕ್ಷರುಗಳು. ಇನ್ನೋರ್ವೀನ್ ಸದಸ್ಯರು  ಉಪಸ್ಥಿತರಿದ್ದರು

Leave a Reply

Your email address will not be published. Required fields are marked *