ಸಕಾಲದಲ್ಲಿ ಮೂಳೆ ಸಾಂದ್ರತೆ ಪರೀಕ್ಷಿಸಿಕೊಂಡು ಜಾಗೃತರಾಗಿ : ಡಾ. ಬಿ.ಸುರೇಶ್
ಶಿವಮೊಗ್ಗ : 40 ವರ್ಷಗಳ ನಂತರ ಸಾಮಾನ್ಯವಾಗಿ ಮಹಿಳೆಯರಲ್ಲಿ ಕೀಲು ಮೂಳೆ ಮಂಡಿ ಚಿಪ್ಪಿನ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳು, ಇದನ್ನು ಸರಿಯಾಗಿ ನಿಯಂತ್ರಿಸಲು ಹಾಗೂ ಮುಂದೆ ಬರುವ ತೊಂದರೆಗಳನ್ನು ತಪ್ಪಿಸಲು ಸಾಕಾಲದಲ್ಲಿ ಮೂಳೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗುತ್ತಿ ಮಲ್ನಾಡ್ ಆಸ್ಪತ್ರೆಯ ಕೀಲು ಮೂಳೆ ತಜ್ಞ ಡಾ. ಬಿ.ಸುರೇಶ್ ಮಾಹಿತಿ ನೀಡಿದರು.
ಅವರು ನಗರದ ರಾಜೇಂದ್ರ ನಗರದ ರೋಟರಿ ಶಾಲೆಯ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಹಾಗೂ ಗುತ್ತಿ ಮಲ್ನಾಡ್ ನರ್ಸಿಂಗ್ ಹೋಂ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೂಳೆ ಸಾಂದ್ರತೆ ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರೀಕ್ಷೆಗೆ ಒಳಪಟ್ಟಾಗ ಅನೇಕ ಲಾಭಗಳಿವೆ. ಜಳ್ಳು ಮೂಳೆಗಳಿಂದ ಮುಂದೆ ಆಗುವ ದೊಡ್ಡ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಿಕೊಳ್ಳಬಹುದು. ಮನುಷ್ಯನ ದೇಹದಲ್ಲಿ ಮೂಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನುಡಿದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಮಾತನಾಡಿ, ಮಹಿಳೆಯರು ಉತ್ತಮ ಆರೋಗ್ಯ ಶೈಲಿ, ಜೀವನ ಶೈಲಿ, ಯೋಗ, ಪ್ರಾಣಯಾಮ ಇವುಗಳನ್ನು ಅಳವಡಿಸಿಕೊಂಡರೆ ಮುಂಬರುವ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಸುರೇಶ್ ಅವರಿಗೆ ಸನ್ಮಾನಿಸಲಾಯಿತು. ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ಕಾರ್ಯದರ್ಶಿ ಲತಾ ಸೋಮಣ್ಣ, ಇನ್ನರ್ ವೀಲ್ ಜಿಲ್ಲಾ ಉಪಾಧ್ಯಕ್ಷ ಶಬರಿ ಕಡಿದಾಳ್, ನಿರ್ಮಲಾ ಮಹೇಶ್, ವಿಜಯ ರಾಯ್ಕರ್, ವೀಣಾ ಪ್ರತಾಪ್, ವೀಣಾ ಹರ್ಷ, ಜಯಂತಿ ಮಾಲಿ, ಮಧುರ ಮಹೇಶ್, ಆಶಾ ಶ್ರೀಕಾಂತ, ವಾಣಿ ಪ್ರವೀಣ್, ವಿಜಶ್ರೀ, ಅಮೃತ ಬಸವರಾಜ್, ಜ್ಯೋತಿ ಸುಚ್ಚೀಗೌಡ, ವಿನೋದ ದವಳೆ, ಲತಾ ಶಂಕರ್, ಸುಮಾ ಮಂಜುನಾಥ್, ಪ್ರಾಂಶುಪಾಲ ಸೂರ್ಯನಾರಾಯಣ, ವಿಮಾ ವೆಂಕಟೇಶ್, ಶ್ವೇತಾ ಅಶೀತ, ವೀಣಾ ನರಹರಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.