ರೋಟರಿ ಜಿಲ್ಲೆ 3182 ರಿಂದ ಹಸಿರಿನ ಸುರಕ್ಷತೆ ಮತ್ತು ಆರೋಗ್ಯಕರ ನಾಳೆ ಗಾಗಿ ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ ಕ್ರೀಡೆ ಮತ್ತು ಸ್ವಾಸ್ಥ್ಯ ಆರೋಗ್ಯಕ್ಕಾಗಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಶಿವಮೊಗ್ಗ ಸೈಕಲ್ ಕ್ಲಬ್, ಸುಬ್ಬಯ್ಯ ಕಾಲೇಜ್ ಆಫ್ ನರ್ಸಿಂಗ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಹಾಗೂ ರೋಟರಿ ಸಂಸ್ಥೆಯ ಸದಸ್ಯರು ಸೇರಿ ಸೈಕ್ಲೊತಾನ್ ಹಾಗೂ ವಾಕಥಾನ್ ಜನಜಾಗೃತಿ ಜಾತ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಜಿಲ್ಲೆ 3182 ರ ಜಿಲ್ಲಾ ಗವರ್ನರಾದ ದೇವಾನಂದ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ ನಟರಾಜ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿ ಹೆಚ್ ಓ ಡಾ. ನಟರಾಜ್ ರವರು ಸಾರ್ವಜನಿಕರಿಗೆ ಉತ್ತೇಜಿಸಿ ಮಾತನಾಡುತ್ತಾ ಇತ್ತೀಚಿನ ದಿನಪತ್ರಿಕೆ ಸೊಳ್ಳೆ ಯಿಂದ ತೆಂಗು ಜ್ವರ ಹಾಗೂ ವೈರಲ್ ಫೀವರ್ ಹೆಚ್ಚಾಗುತ್ತಿದೆ ಮನೆಯ ಸುತ್ತಮುತ್ತ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸಂಡೆ ಮೇಡಂ ನಿಯಂತ್ರಿಸುವುದು ಮುಖ್ಯವಾಗಿರುತ್ತದೆ ಹಾಗೂ ಸ್ವಚ್ಛತೆಯ ಆರೋಗ್ಯಕ್ಕೆ ಊಟದ ಮುಂಚೆ ಎಲ್ಲರೂ ಕೈತುಳಿತು ಸ್ವಚ್ಛತೆಯಿಂದ ಊಟ ಮಾಡಬೇಕು ದಿನನಿತ್ಯ ಸ್ವಚ್ಛತೆಯಿಂದ ಆರೋಗ್ಯಕ್ಕಾಗಿ ಯೋಗಾಸನ ಹಾಗೂ ಪ್ರಾಣಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲೆ ಗವರ್ನರ್ ಆದ ದೇವಾನಂದ್ ರವರು ರಸ್ತೆ ಸುರಕ್ಷತೆಗೆ ನಾವೆಲ್ಲರೂ ಜವಾಬ್ದಾರಿಯಿಂದ ವಾಹನ ಚಲಿಸುವಾಗ ಸಂಚಾರಿ ನಿಯಮವನ್ನು ಪಾಲಿಸಬೇಕು ಹಾಗೂ ಎಲ್ಲರೂ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಕಡ್ಡಾಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು ರೋಟರಿ ಸಂಸ್ಥೆಯು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಹಾಗೂ ಇನ್ನು ಮುಂದೆ ಸಮಾಜ ಮುಖಿ ಕೆಲಸಗಳಿಗೆ ರೋಟರಿ ಸಂಸ್ಥೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಿಡಿಜಿ ಚಂದ್ರಶೇಖರ್, ಪಿಡಿಜಿ ರಾಜಾರಾಮ್ ಭಟ್,
ಡಿ ಜಿ ಎನ್. ಬಿ ಎಮ್ ಭಟ್, ಸುಬ್ರಹ್ಮಣ್ಯ ಬಸ್ರಿ, ಅಮಿತ್ ಅರವಿಂದ್, ರವಿ ಕೋಟೋಜಿ, ಕೆಂಪರಾಜು, ಅಸಿಸ್ಟೆಂಟ್ ಗವರ್ನರ್ ನಾಗರಾಜ್,
ಡಾ ಗುಡ್ಡಪ್ಪ ಕಸಬಿ, ಮಂಜುನಾಥ್ ಕದಂ, ಕಿರಣ್ ಕುಮಾರ್ ಹಾಗೂ ನಗರದ ಎಲ್ಲಾ ರೋಟರಿ ಸದಸ್ಯರು ಅಧ್ಯಕ್ಷರು ಕಾರ್ಯದರ್ಶಿಗಳು, ಜಿಲ್ಲಾ ಕುಟುಂಬ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.