ರೋಟರಿ ಸಂಸ್ಥೆಯ ಸದಸ್ಯತ್ವದಿಂದ ಸಮಾಜಮುಖಿ ಕೆಲಸದೊಂದಿಗೆ ವೈಯಕ್ತಿಕ ವರ್ಚಸ್ಸು ಹಾಗು ವ್ಯಾವಹಾರಿಕ ಹೆಚ್ಚು ಅನುಕೂಲವಾಗುವುದು ಎಂದು ವಲಯ 11ರ ಅಸಿಸ್ಟೆಂಟ್ ಗವರ್ನರ್ ಪ್ರೊಫೆಸರ್ ಸುರೇಶ್ ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ತರೀಕೆರೆ ಕ್ಲಬ್ ಬಹು ವಲಯ ಮಟ್ಟದ ಕಾರ್ಯಕ್ರಮ ವನ್ನು ನಗರದ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನಲ್ಲಿ ರೋಟರಿ ಜಿಲ್ಲೆ 3182 ವಲಯ 7 ರ ರೋಟರಿ ಕ್ಲಬ್ ತರೀಕೆರೆ ಹಾಗೂ ವಲಯ 11 ರ ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ಜಂಟಿಯಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯಲ್ಲಿ ನೂತನವಾಗಿ ಸದಸ್ಯರು ಸೇರುವುದರ ಪ್ರಯೋಜನ ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುವುದರ ಜೊತೆಗೆ ವೈಯಕ್ತಿಕ ಹಾಗೂ ವ್ಯವಹಾರಿಕವಾಗಿ ತುಂಬಾ ಅನುಕೂಲವಾಗುತ್ತದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಪ್ರಪಂಚದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಆ ಸಂಸ್ಥೆಯ ಸದಸ್ಯರು ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷ ಕಿರಣ್ ಮಾತನಾಡಿ, ಅಂತರ್ ವಲಯ ಮಟ್ಟದ ಕ್ಲಬ್ ಜೊತೆಯಲ್ಲಿ ನಾವು ಸಭೆಗಳನ್ನು ಮಾಡುವುದರಿಂದ ಒಳ್ಳೆಯ ಸ್ನೇಹವನ್ನು ಬೆಳೆಸಿಕೊಳ್ಳಬಹುದು. ಜೊತೆಯಲ್ಲಿ ರೋಟರಿಯಿಂದ ಮಾಡಬಹುದಾದ ಸಮಾಜಮುಖಿ ಕೆಲಸಗಳ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು. ವಲಯ 7 ರ ರೋಟರಿ ಕ್ಲಬ್ ತರೀಕೆರೆಯ ಎಲ್ಲಾ ಸದಸ್ಯರು ಜಂಟಿ ವಲಯ ಸಭೆಗೆ ಬಂದಿರುವುದು ತಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.
ವಲಯ 7 ರ ಕೋಟಿ ಕ್ಲಬ್ ತರೀಕೆರೆ ಅಧ್ಯಕ್ಷ ರಾಕೇಶ್ ಮಾತನಾಡಿ, ವಲಯ 11 ರ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ರವರು ಈ ದಿನ ನಮಗೆ ಆಮಂತ್ರಣ ನೀಡಿ ಸಭೆ ನಡೆಸುತ್ತಿರುವುದು ಬಹಳ ಸಂತೋಷವಾಗಿದೆ. ಸಭೆಯಲ್ಲಿ ರೋಟರಿ ಸದಸ್ಯತ್ವದ ಬಗ್ಗೆ ಮಾಹಿತಿಯನ್ನು ತಿಳಿಸಿದ ಅಸಿಸ್ಟೆಂಟ್ ಗವರ್ನರ್ ಸುರೇಶ್ ರವರಿಗೂ ಹಾಗೂ ಕಾರ್ಯಕ್ರಮ ಆಯೋಜಿಸಿದ ಎಲ್ಲಾ ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷರಿಗೂ ಎಲ್ಲಾ ಸದಸ್ಯರಿಗೂ ಧನ್ಯವಾದಗಳು ಎಂದರು.
ವಲಯ 7 ರ ಅಸಿಸ್ಟೆಂಟ್ ಗವರ್ನರ್ ನಾಸಿರ್ ಹುಸೇನ್ ಮಾತನಾಡಿ, ಎಲ್ಲಾ ಕ್ಲಬ್ ಗಳು ಅಂತರ್ ವಲಯ ಮಟ್ಟದ ಕ್ಲಬ್ ಗಳ ಜೊತೆ ಸಭೆ ಮಾಡುವುದರಿಂದ ತುಂಬಾ ಉಪಯುಕ್ತವಾಗುತ್ತದೆ.
ರೋಟರಿ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ನಾವೆಲ್ಲರೂ ಧನ್ಯರು. ಅಂತರರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆಯು ಪಲ್ಸ್ ಪೋಲಿಯೋ ಲಸಿಕೆಯನ್ನು ಪ್ರಪಂಚಕ್ಕೆ ನೀಡಿದ್ದು, ಅಂತಹ ಸಂಸ್ಥೆಯಲ್ಲಿ ನಾವೆಲ್ಲರೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು, ಜೊತೆಯಲ್ಲಿ ನೂತನ ಸದಸ್ಯರಿಗೆ ರೋಟರಿಯ ಬಗ್ಗೆ ಹಾಗೂ ಸಾರ್ವಜನಿಕರಲ್ಲಿ ನಾವುಗಳು ಮಾಹಿತಿಗಳನ್ನು ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಡಿಜಿ ಪ್ರಕಾಶ್, ಜೋನಲ್ ಲಿಪ್ಟಿನೆಂಟ್ ಮಂಜುನಾಥ್ ಕದಂ, ರೋಟರಿ ಸೆಂಟ್ರಲ್ ಕ್ಲಬ್ ನ ಕಾರ್ಯದರ್ಶಿ ಈಶ್ವರ್, ತರೀಕೆರೆ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರವಿಕುಮಾರ್, ರೋಟರಿ ಸದಸ್ಯರಾದ ಬಸವರಾಜ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಜಗದೀಶ್, ಬಲರಾಮ್, ಮಾಜಿ ಅಸಿಸ್ಟೆಂಟ್ ಗವರ್ನರ್ ವಸಂತ ಹೋಬಳಿದಾರ್ , ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್, ಚಂದ್ರು, ಸಂತೋಷ್, ತರೀಕೆರೆ ಕ್ಲಬ್ ನ ಸದಸ್ಯರಾದ ಗೋವರ್ಧನ್, ಡಾ. ಶರತ್ ಹಾಗೂ ಇತರೆ ಸದಸ್ಯರು ಮತ್ತು ವಲಯ 7 ಹಾಗೂ ವಲಯ 11 ರ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.