ರೋಟರಿ ಕ್ಲಬ್ ಸೆಂಟ್ರಲ್ ನಿಂದ ವಿನೋಬಾನಗರದ ಡಿವಿಎಸ್ ಪ್ರೌಢಶಾಲೆಯಲ್ಲಿ ಇಂಟರಾಕ್ಟ ಕ್ಲಬ್ ಉದ್ಘಾಟನೆ

ಉತ್ತಮ ವಿದ್ಯಾರ್ಥಿ ನಾಯಕರನ್ನು ರೂಪಿಸಲು ಇನ್ಟರಾಕ್ಟ್ ಕ್ಲಬ್ ಸಹಕಾರಿ : ರೋ ಕಿರಣ್ ಕುಮಾರ್.ಜಿ

ಶಿವಮೊಗ್ಗ : ಇಂಟರಾಕ್ಟ್ ಕ್ಲಬ್ 1962 ರಲ್ಲಿ ಪ್ರಾರಂಭವಾಗಿ ಶಾಲೆಯ ಇಂಟರಾಕ್ಟ್ ಕ್ಲಬ್ ನಿಂದ ಉತ್ತಮ ವಿದ್ಯಾರ್ಥಿ ನಾಯಕರನ್ನು ಸಮಾಜಕ್ಕೆ ಕೊಟ್ಟಿದೆ ಎಂದು ಶಿವಮೊಗ್ಗ ಸೆಂಟ್ರಲ್ ಕ್ಲಬ್ ನ ಅಧ್ಯಕ್ಷ ಕಿರಣ್ ಕುಮಾರ್.ಜಿ ಹೇಳಿದರು.

ನಗರದ ವಿನೋಬನಗರ ಡಿವಿಎಸ್ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಇಂಟರಾಕ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಶಕ್ತಿ ರಾಷ್ಟ್ರದ ಶಕ್ತಿ ಎಂದು ತಿಳಿಸಿ, ಅಧ್ಯಕ್ಷರಿಗೂ ಹಾಗೂ ಕಾರ್ಯದರ್ಶಿಗಳಿಗೂ ಶುಭಾಶಯ ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಇಂಟರಾಕ್ಟ್ ಚೇರ್ಮನ್ ವಿನೋದ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಇಂಟರಾಕ್ಟ್ ಕ್ಲಬ್, ವಿದ್ಯಾರ್ಥಿಗಳು ನಾಯಕತ್ವ ಗುಣ ಹಾಗೂ ವಾಕ್ ಚಾತುರ್ಯಾ ಕಲಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಇಂಟರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಲಕ್ಷ್ಮಣ್, ರೋಟರಿ ಸಂಸ್ಥೆಯು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಸ್ವಂತವಾಗಿ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅವರ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸ್ಥಾಪಿಸಿರುವುದು ಶ್ಲಾಘನೀಯ. ಇದಕ್ಕೆ ಎಲ್ಲಾ ರೋಟರಿ ಸಂಸ್ಥೆಯ ಅಧ್ಯಕ್ಷರಿಗೂ ಹಾಗೂ ಸದಸ್ಯರಿಗೂ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸದಸ್ಯ ಕಾರ್ಯದರ್ಶಿ ಈಶ್ವರ್, ಇಂಟರಾಕ್ಟ್ ಚೇರ್ಮನ್ ವಿನೋದ್, ಖಜಾಂಚಿ ಬಸವರಾಜ್, ಮಾಜಿ ಅಸಿಸ್ಟೆಂಟ್ ಗೌವರ್ನರ್ ರವಿ ಕೋಟೋಜಿ, ನಿರಂಜನ, ಗುರುರಾಜ್, ಗಣೇಶ್ ಅಂಗಡಿ, ಜಗದೀಶ್, ಗಣೇಶ್.ಕೆ.ವಿ, ಗಿರೀಶ್, ಮೋಹನ್, ದೀಪಾ ಜೈಶೀಲ್ ಶೆಟ್ಟಿ, ರಾಜಶ್ರೀ ಬಸವರಾಜ, ಜ್ಯೋತಿ ಶ್ರೀರಾಮ್, ಆನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಜಗದೀಶ್, ಕಾರ್ಯದರ್ಶಿ ಶುಭ ಚಿದಾನಂದ್ ಹಾಗೂ ನಯನ ಗಣೇಶ್ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *