ಶಿವಮೊಗ್ಗ ನಗರದ ಗೋಪಾಳದಲ್ಲಿರುವ ವಿಶಾಲ್ ಮಾರ್ಟ್ ಎದುರು ಇರುವ
ರೋಟರಿ ಭವನದಲ್ಲಿ ಜುಲೈ 16 ಮಂಗಳವಾರ ರಂದು ಸಂಜೆ 6.00 ಗಂಟೆಗೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್. ಹಾಗೂ ಆನ್ಸ್ ಕ್ಲಬ್ಬಿನ 2024 -25 ನೇ ಸಾಲಿನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ 2024 -25 ನೇ ಸಾಲಿನ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಅಧ್ಯಕ್ಷರಾಗಿ
ಕಿರಣ್ ಕುಮಾರ್ ಜಿ ಕಾರ್ಯದರ್ಶಿಯಾಗಿ ಈಶ್ವರ ಬಿ ವಿ. ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಶ್ರೀಮತಿ ಗೀತಾ ಜಗದೀಶ್ ಕಾರ್ಯದರ್ಶಿಯಾಗಿ ಶುಭ ಚಿದಾನಂದಯ್ಯ ಹಾಗೂ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವರು. ರೋಟರಿ ಮಾಜಿ ಜಿಲ್ಲಾ ಗೌರ್ನರ್ ಅಭಿನಂದನ್ ಶೆಟ್ಟಿ. ಇನ್ನರ್ ವೀಲ್ ಮಾಜಿ ಜಿಲ್ಲಾ ಚೇರ್ಮನ್ ಶ್ರೀಮತಿ ವಾರಿಜಾ ಜಗದೀಶ್ ಪ್ರತಿಷ್ಠಾಪನಾಧಿಕಾರಿಗಳಾಗಿ ಭಾಗವಹಿಸುವರು ವಲಯ 11ರ ಸಹಾಯಕ ಗೌರ್ನರ್ ಎಚ್ ಎಮ್ ಸುರೇಶ್ ವಲಯಸೇನಾನಿ ಮಂಜುನಾಥ್ ರಾವ್ ಕದಂ. 2023 -24ನೇ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಅಧ್ಯಕ್ಷ ಹೆಚ್ ಪಿ ಶಿವರಾಜ್ ಕಾರ್ಯದರ್ಶಿ ಕಿರಣ್ ಕುಮಾರ್ ಜಿ ಹಾಗೂ 2024- 25 ನೇ ಸಾಲಿನ ಆಡಳಿತ ಮಂಡಳಿಯ ಸದಸ್ಯರು ನಿರ್ದೇಶಕರು. ಆನ್ಸ್ ಕ್ಲಬ್ಬಿನ. ನಿರ್ದೇಶಕರು ಸದಸ್ಯರು ಉಪಸ್ಥಿತರಿರುವರು