ರಾಜ್ಯಪುರಸ್ಕಾರ ಪಪೂರ್ವಸಿದ್ಧತಾ ಪರೀಕ್ಷಾ ಶಿಬಿರವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಶಾಖಾವತಿಇಂದ ನಗರದ ಬಿ.ಹೆಚ್.ರಸ್ತೆಯ ಸ್ಕೌಟ್ಸ್ ಭವನದಲ್ಲಿ ಆಯೋಜಿಸಲಾಗಿದ್ದ 3 ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ,ರೋವರ್ಸ್, ರೇಂಜರ್ ವಿಭಾಗದ ರಾಜ್ಯ ಪುರಸ್ಕಾರ ಪೂರ್ವಸಿದ್ಧತಾ ಶಿಬಿರ ಸಂಪನ್ನ ಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿ,ವಿದ್ಯಾರ್ತಿನಿಯರು ಈ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ತರಬೇತಿಯ ಜೊತೆಗೆ ಜೀವನದ ಕಲೆಗಳನ್ನು ಕಲಿತು, ಸಂತೋಷಗೊಂಡರು ಇದೆ ಸಂಧರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ. ಕೆ.ಪಿ.ಬಿಂದುಕುಮಾರ್ ಅವರು ಅಧ್ಯಕ್ಷತೆ ವಹಿಸಿಮಾತನಾಡುತ್ತಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ರಾಜ್ಯಪುರಸ್ಕಾರ ವು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಆಸಕ್ತಿಯಿಂದ ಕಲಿತರೆ ಸುಲಭವಾಗಿ ರಾಜ್ಯಪುರಸ್ಕಾರವು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಶ್ರಧ್ಧೆಹಾಗೂ ಆಸಕ್ತಿಯಿಂದ ಕಲಿತರೆ ಸುಲಭವಾಗಿ ರಾಜ್ಯಪುರಸ್ಕಾರ ಪಡೆದು ಮುಂದೆ ರಾಷ್ಟ್ರಮಟ್ಟಕ್ಕೆ ತಲುಪಬಹುದು, ಇದು ಅವರ ಸಾಧನೆಯ ಪ್ರಾರಂಭ ಹಂತವಾಗಿದೆ ಎಂದು ನುಡಿದರು. ಇದೆ ಸಂಧರ್ಭದಲ್ಲಿ ಜಿಲ್ಲಾ ಗೈಡ್ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರ ಶೇಖರ್ ಅವರು ಮಾತನಾಡುತ್ತಾ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಶಿಬಿರಗಳು ಮಕ್ಕಳಲ್ಲಿ ಸ್ವಾವಲಂಬನೆಯನ್ನು ಬೆಳೆಸಿ ಸ್ವತಂತ್ರ ಜೀವನ ನಡೆಸಲು ಪ್ರೇರೇಪಿಸುತ್ತವೆ ಎಂದು ಹೇಳುತ್ತಾ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿದರು, ಕೇಂದ್ರ ಸ್ಥಾನಿಕ ಆಯುಕ್ತರಾದ ಕೆ.ರವಿಯವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಈ ರಾಜ್ಯಪುರಸ್ಕಾರ ಉತ್ತಮ ಅವಕಾಶ ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನುಡಿದರು. ಮತ್ತೋರ್ವ ಕೇಂದ್ರ ಸ್ಥನಿಕ ಆಯುಕ್ತ ಶ್ರೀ.ವಿಜಯುಮಾರ್ ಅವರು ಮಾತನಾಡಿ ನಮ್ಮ ಜಿಲ್ಲಾ ಕೇಂದ್ರದಲ್ಲಿ ಉತ್ತಮ ತರಬೇತಿ ನೀಡುವ ತಂಡ ಇದ್ದು ಇಲ್ಲಿ ತರಬೇತಿ ಪಡೆದ ಮಕ್ಕಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಎಲ್ಲಾ ಮಕ್ಕಳಿಗೂ ಶುಭಾಷಯಗಳನ್ನು ತಿಳಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ. ರಾಜೇಶ್ಅವಲಕ್ಕಿ, ನಿರೂಪಿಸಿದರು ಮಕ್ಕಳಿಗೆ ಅನೇಕ ಸ್ಕೌಟ್ಸ್ ಮತ್ತು ಗೈಡ್ಸ್ ನ ನೀತಿನಿಯಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಶ್ರೀ ಹೆಚ್.ಪರಮೇಶ್ವರ್ , ಖಜಾಂಚಿ ಶ್ರೀ. ಚೂಡಾಮಣಿಪವಾರ್, ಜಂಟಿಕಾರ್ಯದರ್ಶಿ ಶ್ರೀಮತಿ.ಲಕ್ಷ್ಮಿ ಕೆ ರವಿ,ತರಬೇತಿ ತಂಡದ ಆಯುಕ್ತರಾದ ಶ್ರೀ ಹೆಚ್. ಶಿವಶಂಕರ್ ಶ್ರೀ. ಚಂದ್ರ ಶೇಖರಯ್ಯ, ಶ್ರೀ.ಮಲ್ಲಿಕಾರ್ಜುನ ಕಾಣೂರ್, ಶ್ರೀ,ಪರಮೇಶ್ವರಯ್ಯ, ಶ್ರೀ. ಪುಟ್ಡಪ್ಪ ಗೌಳೇರ್ ಶ್ರೀ, ವಿನಯ ಭೂಷಣ್,ತರಬೇತಿ ತಂಡದ ನಾಯಕಿಯರಾದ ಶ್ರೀಮತಿ ಶಾಂತಮ್ಮ, ಶ್ರೀಮತಿ ಗೀತಾ ಚಿಕ್ಮಠ್, ಶ್ರೀಮತಿ ನಾಗಪ್ರಿಯ, ತರಬೇತಿ ತಂಡದ ಸಹನಾಯಕಿರು, ಮುಂತಾದ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕ,ಶಿಕ್ಷಕಿಯರಯ ಭಾಗವಹಿಸಿದ್ದರು.